Sunday, March 3, 2024

Use Jaggery instead of Sugar or ಸಕ್ಕರೆ ಬದಲು ಬೆಲ್ಲ ಏಕೆ ಬಳಸಬೇಕು

 


 

ಸಕ್ಕರೆ ಬದಲು ಬೆಲ್ಲ ಏಕೆ ಬಳಸಬೇಕು-- Use Jaggery instead of Sugar

 

ಕಬ್ಬಿನ ರಸವನ್ನು ಬತ್ತಿಸಿ ಬೆಲ್ಲವನ್ನು ತಯಾರಿಸಲಾಗುತ್ತದೆ. ಬೆಲ್ಲವನ್ನು ತಯಾರಿಸುವಾಗ, ಕಬ್ಬಿನಲ್ಲಿ 

ಇರುವ ವಿವಿಧ ಪೋಷಕಾಂಶಗಳು, ಖನಿಜಗಳು, ಲವಣಗಳು ಮತ್ತು ಜೀವಸತ್ವಗಳು ಬೆಲ್ಲದಲ್ಲಿ 

ಉಳಿಯುತ್ತವೆ. ಬೆಲ್ಲವು ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಮ್ಯಾಂಗನೀಸ್ ಮುಂತಾದ 

ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ ಮತ್ತು ಇದು ವಿಟಮಿನ್-ಬಿ, ಕ್ಯಾಲ್ಸಿಯಂ, ಸತು, ರಂಜಕ ಮತ್ತು

ತಾಮ್ರದಂತಹ ಪ್ರಮುಖ ಅಂಶಗಳನ್ನು ಒಳಗೊಂಡಿದೆ. ಬೆಲ್ಲ ತಿನ್ನುವುದರಿಂದ ಆಗುವ ಲಾಭಗಳ ಬಗ್ಗೆ 

ಇಲ್ಲಿ ಮಾಹಿತಿ ನೀಡಲಾಗಿದೆ.


Jaggery is made by drying Sugarcane juice. While making Jaggery, various Nutrients, 

Minerals, Salts and Vitamins present in Sugarcane remain in the Jaggery. Jaggery is rich in

Nutrients like Iron, Magnesium, Potassium, Manganese and contains important elements

like Vitamin-B, Calcium, Zinc, Phosphorus and Copper. 

 


 

Here is information about the benefits of eating Jaggery.



ಬೆಲ್ಲದ ಲಾಭಗಳು ಕೆಳಗಿನಂತಿವೆ -- Some of the Uses of Using Jaggery



ಹಿಮೋಗ್ಲೋಬಿನ್ ಹೆಚ್ಚಿಸುತ್ತದೆ... Increases Hemoglobin Levels


ಬೆಲ್ಲವನ್ನು ತಿನ್ನುವುದು ರಕ್ತಹೀನತೆ ನಿವಾರಣೆಗೆ ಪ್ರಯೋಜನಕಾರಿ. 100 ಗ್ರಾಂ ಬೆಲ್ಲದಲ್ಲಿ 11 ಮಿಗ್ರಾಂ

 ಕಬ್ಬಿಣಾಂಶವಿದೆ. ರಕ್ತದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾಗುವುದು ರಕ್ತಹೀನತೆಗೆ ಕಾರಣವಾಗುತ್ತದೆ

ಅಂತಹ ಸಂದರ್ಭದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಲು ಬೆಲ್ಲವು ತುಂಬಾ 

ಉಪಯುಕ್ತವಾಗಿದೆ.

 

Eating Jaggery is beneficial in treating anemia. 100 grams of Jaggery contains 11 mg of 

iron. Decrease in hemoglobin in the blood leads to anemia. Jaggery is very useful in 

increasing the amount of hemoglobin in such a case. It is also a Blood purifier.

 


 



ರಕ್ತದೊತ್ತಡವನ್ನು ಹತೋಟಿಯಲ್ಲಿಡುತ್ತದೆ… Controls Blood Pressure


ಬೆಲ್ಲ ತಿನ್ನುವುದರಿಂದ ರಕ್ತದೊತ್ತಡವನ್ನು ಸರಿಯಾಗಿ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ

ಬೆಲ್ಲದಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿರುವ ಕಾರಣ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.

 

Eating Jaggery helps in maintaining proper Blood Pressure. Jaggery keeps Blood pressure 

under control as it is rich in Potassium.

 


 

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ… Improves Digestion



ಬೆಲ್ಲವು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅಲ್ಲದೆ ಬೆಲ್ಲವನ್ನು ನಿಯಮಿತವಾಗಿ

 ತಿನ್ನುವುದರಿಂದ ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ.


Jaggery helps improve Digestion. Also eating Jaggery regularly cleans the Stomach and 

relieves from Constipation.


ಬೆಲ್ಲವು ತೂಕವನ್ನು ಇಳಿಸಿಕೊಳ್ಳಲು, ಹೊಟ್ಟೆಯ ಸಮಸ್ಯೆಯನ್ನು ಶಮನ 

ಮಾಡಿಕೊಳ್ಳಲು ಬಳಸಲಾಗುತ್ತದೆ. ಇದರಲ್ಲಿರುವ ಪೌಷ್ಟಿಕ ಸತ್ವಗಳು ರೋಗ ನಿರೋಧಕ 

ಶಕ್ತಿಯನ್ನು ಹೊಂದಿದೆ.


ಬೆಲ್ಲ ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು, ಅದ್ಭುತವಾದ ಮನೆಮದ್ದಾಗಿದೆ. ಸಾಮಾನ್ಯವಾಗಿ ಶೀತ, ಹೊಟ್ಟೆ ಅಸ್ವಸ್ಥತೆ, ಮುಟ್ಟಿನ ನೋವು, ಸೆಳೆತ, ಆತಂಕ , ತಲೆನೋವು, ಊದಿಕೊಂಡ ಪಾದಗಳು ಇನ್ನು ಅನೇಕ ಸಮಸ್ಯೆಗಳಿಗೆ ಬೆಲ್ಲವು ಅತ್ಯುತ್ತಮವಾದ ಮನೆಮದ್ದಾಗಿ ನಮ್ಮ ಹಿರಿಯರ ಕಾಲದಿಂದಲೂ ಬಳಸುತ್ತಾ ಬಂದ್ದಿದ್ದೇವೆ.

Jaggery has immunity power and is a wonderful home remedy. Generally, we have been 

using Jaggery as an excellent home remedy for Cold, Stomach Discomfort, Menstrual pain,

Muscle cramps, Anxiety, Headache, Swollen Feet and many other problems since the time of our Elders. 


 

ನಿಮ್ಮ ಶೀತವನ್ನು ಪರಿಣಾಮಕಾರಿಯಾಗಿ ಹೊಡೆದೋಡಿಸಲು ಶುಂಠಿಯ ರಸದೊಂದಿಗೆ ಬೆಲ್ಲವನ್ನು ಬೆರಸಿ ಸೇವಿಸಿ.

Mix Jaggery with ginger juice to fight your cold effectively.

ಹೆಚ್ಚು ಶಕ್ತಿ ಹೊಂದಲು ಬೆಲ್ಲವನ್ನು ತುಪ್ಪದೊಂದಿಗೆ ತೆಗೆದುಕೊಳ್ಳಬಹುದು.

Jaggery can be taken with Ghee to have more power.

ನಿಮ್ಮ ಆಯಾಸ ಮತ್ತು ಉಸಿರಾಟದ ತೊಂದರೆಗೆ ಬೆಲ್ಲವನ್ನು ಸಾಸಿವೆ ಎಣ್ಣೆಯೊಂದಿಗೆ ಬೆರೆಸಿ ಸೇವಿಸಲಾಗುತ್ತದೆ.

 


 

 

ಎಳ್ಳಿನೊಂದಿಗೆ ಬೆಲ್ಲ ಸೇವನೆ ಮಾಡಿದಾಗ ಮಹಿಳೆಯರಲ್ಲಿ ಕಾಣಿಸುವ ಡಿಸ್ಮೆನೋರಿಯಾ ಸಮಸ್ಯೆಗೆ

ಚಿಕಿತ್ಸಕವಾಗಿ ಕಾರ್ಯ ನಿರ್ವಹಿಸುತ್ತದೆ.

Jaggery mixed with mustard oil is consumed for your tiredness and shortness of breath.

When Jaggery is consumed with Sesame seeds, it works therapeutically for dysmenorrhea

in women. 


 

ಮಹಿಳೆಯರಿಗೆ ಉಪಯುಕ್ತ… Useful for Females or Women


ಬೆಲ್ಲ ತಿನ್ನುವುದು ಎಲ್ಲಾ ವಯಸ್ಸಿನ ಮಹಿಳೆಯರಿಗೆ ಉಪಯುಕ್ತವಾಗಿದೆ. ಗೋಚರಿಸುತ್ತದೆ.

It appears Eating Jaggery is useful for women of all ages since it increases their 

Hemoglobin Level.

 

---------- Hari Om ----------



Friday, February 16, 2024

Ratha Saptami -- Importance

 

ಏಳು ಕುದುರೆ ಮೇಲೇರಿ ಬರುವ ಸೂರ್ಯ; ರಥ ಸಪ್ತಮಿಯ ಮಹತ್ವ


Importance of Ratha Saptami – 

 Seated on 7 Horses

 

                             

 

ಈ ದಿನ ಸೂರ್ಯದೇವನು ಏಳು ಕುದುರೆಗಳ ರಥದಲ್ಲಿ ಕಾಣಿಸಿಕೊಂಡನು. ಆದ್ದರಿಂದಲೇ ಈ ಸಪ್ತಮಿ ದಿನವನ್ನು ರಥಸಪ್ತಮಿ ಎಂದು ಕರೆಯುತ್ತಾರೆ.

 
ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ದಿನ ಈ ರಥ ಸಪ್ತಮಿ ಬರುತ್ತದೆ. ರಥ ಸಪ್ತಮಿ ಹಬ್ಬವನ್ನು ಸೂರ್ಯ ಜಯಂತಿ ಎಂದು ಸೂರ್ಯನ ಜನ್ಮದಿನವೆಂದು ಆಚರಿಸಲಾಗುತ್ತದೆ. ಇದೇ ಕಾರಣಕ್ಕೆ ಈ ದಿನವನ್ನು ಸೂರ್ಯ ಸಪ್ತಮಿ ಎಂದೂ ಕರೆಯುತ್ತಾರೆ. ಈ ದಿನ ಸೂರ್ಯದೇವನು ಏಳು ಕುದುರೆಗಳ ರಥದಲ್ಲಿ ಕಾಣಿಸಿಕೊಂಡನು. ಆದ್ದರಿಂದಲೇ ಈ ಸಪ್ತಮಿ ದಿನವನನು ರಥಸಪ್ತಮಿ ಎಂದು ಕರೆಯುತ್ತಾರೆ.


ಈ ದಿನದಂದು ಸೂರ್ಯನ ಆರಾಧನೆ ಮಾಡಿದರೆ ಒಳಿತಾಗಲಿದೆ ಎಂಬ ನಂಬಿಕೆ ಇದೆ



ಸಕಲ ಜೀವಿಗಳಿಗೂ ಬೇಕು ಸೂರ್ಯನ ಬೆಳಕು

ಸಕಲ ಜೀವಿಗಳ ಜೀವನಕ್ಕೆ ಸೂರ್ಯ ಅವಶ್ಯಕ. ಇದೇ ಕಾರಣಕ್ಕೆ ಸೂರ್ಯನ ಪೂಜೆಗೆ ವಿಶೇಷ ಮಾನ್ಯತೆ ಇದೆ. ಈ ದಿನ ಸೂರ್ಯನ ಆರಾಧನೆ ನಡೆಸಿದರೆ ಆರೋಗ್ಯ ಮತ್ತು ಖ್ಯಾತಿ ಸಿಗುತ್ತದೆ. ಶಿಕ್ಷಣ, ಉದ್ಯೋಗ ಮತ್ತು ವೃತ್ತಿಯಲ್ಲಿ ಅಡೆತಡೆ ನಿವಾರಣೆ ಆಗುತ್ತದೆ. ಎಲ್ಲಾ ರೀತಿಯ ದೈಹಿಕ ಮತ್ತು ಮಾನಸಿಕ ರೋಗಗಳು ಮತ್ತು ನೋವುಗಳು ಗುಣವಾಗುತ್ತವೆ ಎಂಬ ನಂಬಿಕೆ ಇದೆ.

 

                                                                        SUN God

 

ನವಚೈತನ್ಯ ತರುವ ರಥಸಪ್ತಮಿ

ಚಳಿಗಾಲದಲ್ಲಿ ಒಣಗಿದ ತರಗೆಲೆಯಂತೆ ಆದ ಶರೀರ ರಥ ಸಪ್ತಮಿಯ ಬಳಿಕ ಸೂರ್ಯನ ಶಾಖದಿಂದ ಹೊಸ ಚೈತನ್ಯ ಪಡೆಯುತ್ತದೆ. ಈ ಕಾರಣದಿಂದ ಈ ದಿನ ಸೂರ್ಯನಿಗೆ ಮೈಯೊಡ್ಡಿ ವಿಶೇಷ ಪೂಜೆ ಸಲ್ಲಿಸಲಾಗುವುದು. ಸೂರ್ಯನ ಬೆಳಕು ಅನೇಕ ರೋಗಗಳನ್ನು ಗುಣಮುಖಮಾಡುವ ಶಕ್ತಿ ಹೊಂದಿದ್ದು, ಈ ದಿನ ಆರೋಗ್ಯಕ್ಕಾಗಿ ಸೂರ್ಯನ ಪೂಜೆ ನಡೆಸಲಾಗುವುದು.



ಈ ರೀತಿ ಮಾಡಿ ಪೂಜೆ

ರಥ ಸಪ್ತಮಿ ದಿನಕ್ಕೆ ಗ್ರಂಥಗಳಲ್ಲಿ ಇದಕ್ಕೆ ವಿಶೇಷ ಮಹತ್ವವಿದೆ. ಈ ದಿನ ಬೆಳಿಗ್ಗೆ ಸ್ನಾನ ಇತ್ಯಾದಿಗಳನ್ನು ಮುಗಿಸಿ ಗಂಗಾಜಲ, ಹೂವುಗಳನ್ನು ಸೂರ್ಯ ದೇವರಿಗೆ ಅರ್ಘ್ಯ ನೀಡುವ ಮೂಲಕ ಅರ್ಪಿಸಬೇಕು. ಸೂರ್ಯನನ್ನು ತುಪ್ಪದ ದೀಪ ಮತ್ತು ಕೆಂಪು ಹೂವುಗಳು, ಕರ್ಪೂರ ಮತ್ತು ಧೂಪದಿಂದ ಪೂಜಿಸಬೇಕು.

ಸೂರ್ಯನನ್ನು ಪೂಜಿಸಿ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿ ಅಥವಾ ಸೂರ್ಯ ಚಾಲೀಸಾವನ್ನು ಪಠಿಸಬೇಕು ನಂತರ ಹಸುವಿನ ತುಪ್ಪದ ದೀಪದಿಂದ ಸೂರ್ಯ ದೇವರ ಆರತಿ ಮಾಡಬೇಕು.



ರಥಸಪ್ತಮಿ ಪೌರಣಿಕ ಮಹತ್ವ

ಯಶೋ ವರ್ಮ ಎಂಬ ರಾಜನಿಗೆ ರೋಗಿಷ್ಠ ಮಗ ಜನಿಸುತ್ತಾನೆ, ಆತನನ್ನು ಗುಣಮುಖನನ್ನಾಗಿ ಮಾಡಲು ರಾಜ ಇನ್ನಿಲ್ಲದ ಪ್ರಯತ್ನ ಮಾಡುತ್ತಾನೆ. ಆಗ ಜ್ಯೋತಿಷಿಯೊಬ್ಬರು ರಥಸಪ್ತಮಿ ವ್ರತ ಆಚರಿಸಲು ಸಲಹೆ ನೀಡುತ್ತಾರೆ. ಅದರಂತೆ ರಾಜನ ಮಗ ಪ್ರತಿನಿತ್ಯ ಸೂರ್ಯನ ಆರಾಧನೆ ಮಾಡುತ್ತಾನೆ. ಇದರಿಂದ ಆತನ ರೋಗ ರುಜಿನಗಳು ಮಾಯಾವಾಗುತ್ತದೆ. ಇದೇ ಕಾರಣಕ್ಕೆ ಪುರಾಣದಲ್ಲಿ ಸೂರ್ಯನ ಆರಾಧನೆಗೆ ವಿಶೇಷ ಮಹತ್ವ ಇದೆ.

 


 

ದಾನಕ್ಕಿದೆ ವಿಶೇಷ ಮಹತ್ವ

ರಥ ಸಪ್ತಮಿಯನ್ನು ಸೂರ್ಯನನ್ನು ಆರಾಧಿಸುವುದರ ಹೊರತಾಗಿ ದಾನ ಮತ್ತು ದಾನದ ದೃಷ್ಟಿಯಿಂದ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ.


ಈ ದಿನ ಸೂರ್ಯನಿಗೆ ಸಂಬಂಧಿಸಿದ ತಾಮ್ರ, ಬೆಲ್ಲ, ಕೆಂಪು ಬಟ್ಟೆ ಮುಂತಾದವುಗಳನ್ನು ದಾನ ಮಾಡಬೇಕು. ಈ ದಿನ ಸೂರ್ಯನನ್ನು ಪೂಜಿಸುವುದರ ಜೊತೆಗೆ ಉಪವಾಸವನ್ನು ಆಚರಿಸುವುದು ಎಲ್ಲಾ ರೋಗಗಳಿಂದ ಮುಕ್ತಿ ನೀಡುತ್ತದೆ ಎಂದು ನಂಬಲಾಗಿದೆ.


ಜಾತಕದಲ್ಲಿ ಸೂರ್ಯನ ಸ್ಥಾನ ಬಲವಾಗುತ್ತದೆ. ಇದಲ್ಲದೇ, ಮಕ್ಕಳಿಲ್ಲದ ದಂಪತಿಗಳು ಮಗುವನ್ನು ಪಡೆಯುತ್ತಾರೆ. ವೃತ್ತಿಯಲ್ಲಿ

 ಬರುತ್ತಿದ್ದ ಅಡೆತಡೆಗಳು ದೂರವಾಗಿ, ವ್ಯಕ್ತಿಯು ಪ್ರಗತಿಯನ್ನು ಪಡೆಯುತ್ತಾನೆ ಎನ್ನಲಾಗಿದೆ.

 


                                              Ratha Saptami Rangoli


------------- Hari Om ------------

  


 

Ratha Saptami

 

 

ರಥಸಪ್ತಮಿ / Ratha Saptami -- 16th February 2024

 

 
 
                                                                 Lord Surya Bhagavan

 

ರಥಸಪ್ತಮಿ ಯು ಜಗತ್ ಚಕ್ಷುವಾದ ಶ್ರೀ ಸೂರ್ಯದೇವ ನನ್ನು ಆರಾಧಿಸಲು ಮೀಸಲಾದ ದಿನ.


ಆರೋಗ್ಯಕಾರಕನಾದ ಸೂರ್ಯದೇವ, ಚರ್ಮ ರೋಗಾದಿಗಳನ್ನು ನಿವಾರಿಸಿ, ನಮ್ಮ ದೇಹವನ್ನು ಸದೃಢಗೊಳಿಸುವ ದಿವಾಕರ ನೂ ಹೌದು. ಇಂತಹ ಖಗ ಇಂದಿನಿಂದ ಗತಿ ಬದಲಿಸಲಿದ್ದಾನೆ. ಮಕರ ಸಂಕ್ರಮಣದ ನಂತರ, ಉತ್ತರಕ್ಕೆ ಚಲಿಸುವ ಭಾನು ವಿನ ವೇಗ ಈ ದಿನದಿಂದ ಕ್ಷಿಪ್ರವಾಗಲಿದೆ.



ರಥಸಪ್ತಮಿಯ ಪರ್ವಕಾಲದ ನಂತರ ಮಿತ್ರ ನು, ಶಿಶಿರ ಋತುವಿನ ಚಳಿಯನ್ನು ಮಾಯಮಾಡಿ ಸುಡು ಬಿಸಿಲು ಹೆಚ್ಚಿಸಲಿದ್ದಾನೆ. ಸಕಲ ಜೀವರಾಶಿಗಳಿಗೂ ಲೇಸನ್ನೇ ಬಯಸುವ ಅರ್ಕ ನು ನಮ್ಮ ಆರೋಗ್ಯ ಹೆಚ್ಚಿಸಲೆಂದು ಈ ಪರ್ವಕಾಲದಲ್ಲಿ ಪ್ರಾರ್ಥಿಸೋಣ.



ಜಪಾಕುಸುಮಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ |


ತಮೋಽರಿಂ ಸರ್ವಪಾಪಘ್ನಂ ಪ್ರಣತೋಽಸ್ಮಿ ದಿವಾಕರಮ್ ||


ಈ ದಿನದ ಸ್ನಾನ ಅತಿ ವಿಶೇಷವಾದುದಾಗಿದೆ.


ವಿಷ್ಣುಸ್ಮೃತಿಃ ಪ್ರಕಾರ,


ಸೂರ್ಯಗ್ರಹಣ ತುಲ್ಯಾ ತು ಶುಕ್ಲಾ ಮಾಘಸ್ಯ ಸಪ್ತಮೀ | ಅರುಣೋದಯವೇಲಾಯಾಂ ತಸ್ಯಾಂ ಸ್ನಾನಂ ಮಹಾಫಲಮ್ || ಎಂಬಂತೆ ರಥಸಪ್ತಮಿ ದಿನ ಮಾಡುವ ಸ್ನಾನ ಹೆಚ್ಚಿನ ಫಲ ನೀಡುತ್ತದೆ.



ಈ ದಿನ ಸೂರ್ಯನಿಗೆ ಪ್ರಿಯವಾದ ಏಳು ಎಕ್ಕದ ಎಲೆಗಳನ್ನು ತಲೆಯ ಮೇಲಿಟ್ಟುಕೊಂಡು ಸ್ನಾನ ಮಾಡಬೇಕು. ಪಾದಗಳ ಮೇಲೆ ಒಂದೊಂದು, ಮಂಡಿಗಳ ಮೇಲೆ ಒಂದೊಂದು, ಭುಜಗಳ ಮೇಲೆ ಒಂದೊಂದು ಹಾಗೂ ತಲೆಯ ಮೇಲೆ ಒಂದನ್ನು ಇಟ್ಟುಕೊಂಡು ಸ್ನಾನ ಮಾಡುವ ಪದ್ಧತಿಯೂ ಇದೆ. ನದಿ ಅಥವಾ ಸರೋವರದಲ್ಲಾದರೇ ಏಳು ಸಲ ಮುಳುಗಬೇಕು. ಮನೆಯಲ್ಲಾದರೆ ನೀರನ್ನು ದೇಹದ ಮೇಲೆ ಸುರಿದುಕೊಳ್ಳಬೇಕು

 

 

                                                                    Ratha Saptami 

 

 

ಧಾರ್ಮಿಕವಾಗಿ ಎಕ್ಕದೆಲೆಯ ಸ್ನಾನಕ್ಕೆ ಮನ್ನಣೆ ನೀಡಲಾಗಿದೆ. ಈ ದಿನ ಎಕ್ಕದೆಲೆಯ ಸ್ನಾನ 

ಸಪ್ತವಿಧದ ಪಾಪ ನಿವಾರಣೆ ಮಾಡುತ್ತದೆ ಎನ್ನುತ್ತದೆ ಧರ್ಮಶಾಸ್ತ್ರ

 

.ಈ ಜನ್ಮದಲ್ಲಿ ಮಾಡಿದ ಪಾಪ,

.ಹಿಂದಿನ ಆರು ಜನ್ಮದಲ್ಲಿ ಮಾಡಿದ ಪಾಪ, .ದೈಹಿಕವಾಗಿ ಮಾಡಿದ ಪಾಪ,

.ಮಾತಿನ ಮೂಲಕ ಮಾಡಿದ ಪಾಪ, .ಮನಸ್ಸಿನ ಮೂಲಕ ಮಾಡಿದ ಪಾಪ,

.ತಿಳಿದು ಮಾಡಿದ ಪಾಪ,

. ತಿಳಿಯದೇ ಮಾಡಿದ ಪಾಪ.


ಇವು ಸಪ್ತವಿಧ ಪಾಪಗಳು.

ಇದರ ಜತೆ ವೈಜ್ಞಾನಿಕವಾಗಿಯೂ ಅರ್ಕ ಪತ್ರೆ ಸ್ನಾನ ಅಷ್ಟೇ ಪ್ರಾಮುಖ್ಯತೆ ಪಡೆದಿದೆ. ಆಯುರ್ವೇದದ ಪ್ರಕಾರ ದೇಹದ ಕೀಲು, ಹಲ್ಲು ಹಾಗೂ ಹೊಟ್ಟೆ ನೋವು ನಿವಾರಣೆಗೆ ಎಕ್ಕದ ಎಲೆಗಳಲ್ಲಿರುವ ಔಷಧೀಯ ಗುಣಗಳು ಪ್ರಯೋಜನಕಾರಿ ಎನ್ನಲಾಗಿದೆ. ಹಾಗಾಗಿ ಎಕ್ಕದೆಲೆಯ ಸ್ನಾನಕ್ಕೆ ಮಹತ್ವ ನೀಡಲಾಗಿದೆ.

 

ಈ ದಿನ ಅರುಣೋದಯ ಕಾಲದಲ್ಲಿ ಎಕ್ಕದ ಎಲೆ ಸಹಿತ ಸ್ನಾನ ಮಾಡುವಾಗ,
ಯದಾಜನ್ಮಕೃತಂ ಪಾಪಂ ಮಯಾ ಜನ್ಮಸು ಜನ್ಮಸು |
ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ ||
ಏತಜ್ಜನ್ಮಕೃತಂ ಪಾಪಂ ಯಚ್ಚ ಜನ್ಮಾಂತರಾರ್ಜಿತಮ್ |
ಮನೋವಾಕ್ಕಾಯಜಂ ಯಚ್ಚ ಜ್ಞಾತಾಜಾತೆ ಚ ಯೇ ಪುನಃ ||
ಇತಿ ಸಪ್ತವಿಧಂ ಪಾಪಂ ಸ್ನಾನಾಮ್ನೇ ಸಪ್ತ ಸಪ್ತಿಕೇ |
ಸಪ್ತವ್ಯಾದಿಸಮಾಯುಕ್ತಂ ಹರ ಮಾಕರಿ ಸಪ್ತಮೀ || ಎಂಬ ಶ್ಲೋಕ ಪಠಿಸಬೇಕು.


 

                                                                        Pic - 1

 

ಸ್ನಾನಾನಂತರ ಒಂದು ಮಣೆ ಮೇಲೆ ರಂಗೋಲಿ ಹಿಟ್ಟಿನಿಂದ ಒಂಟಿ ಚಕ್ರದ ರಥದಲ್ಲಿ ಸೂರ್ಯದೇವನು ಕುಳಿತಿರುವಂತೆ ಬರೆದು ಧ್ಯೇಯಃ ಸದಾ ಸವಿತೃಮಂಡಲಮಧ್ಯವರ್ತಿ ನಾರಾಯಣಃ ಸರಸಿಜಾಸನಸನ್ನಿವಿಷ್ಟ: |


ಕೇಯೂರವಾನ್ ಮಕರಕುಂಡಲವಾನ್ ಕಿರೀಟಹಾರೀ ಹಿರಣ್ಮಯವಪುಃ ಧೃತಶಂಖಚಕ್ರಃ || ಎಂದು ಧ್ಯಾನಿಸಬೇಕು.



ಜನನಿ ಸರ್ವ ಲೋಕಾನಾಂ ಸಪ್ತಮೀ ಸಪ್ತಸಪ್ತಿಕೆ l


ಸಪ್ತವ್ಯಾಹೃತಿಕೇ ದೇವಿ ನಮಸ್ತೇ ಸೂರ್ಯ ಮಂಡಲೇ ll


ಎಂದು ಪ್ರಾರ್ಥಿಸಬೇಕು.


ಓಂ ಮಿತ್ರಾಯ ನಮಃ | ಓಂ ರವಯೇ ನಮಃ |
ಓಂ ಸೂರ್ಯಾಯ ನಮಃ | ಓಂ ಖಗಾಯ ನಮಃ |
ಓಂ ಭಾನುವೇ ನಮಃ | ಓಂ ಪೂಷ್ಣೇ ನಮಃ |
ಓಂ ಹಿರಣ್ಯಗರ್ಭಾಯ ನಮಃ | ಓಂ ಮರೀಚಯೇ ನಮಃ | ಓಂ ಆದಿತ್ಯಾಯ ನಮಃ | ಓಂ ಸವಿತ್ರೇ ನಮಃ | ಓಂ ಅರ್ಕಾಯ ನಮಃ | ಓಂ ಭಾಸ್ಕರಾಯ ನಮಃ | ಓಂ ಸರ್ವರೋಗಹರಾಯ ನಮಃ | ಓಂ ಸರ್ವ ಸಂಪತ್ಪದಾಯ ನಮಃ |


ಓಂ ಸರ್ವಲೋಕಹಿತಾಯ ನಮಃ | ಎಂದು ಅರ್ಚಿಸಬೇಕು.

ಹಾಲು ಮಿಶ್ರಿತ ಗೋಧಿ ಪಾಯಸವನ್ನು ನಿವೇದಿಸಿ ಪೂಜಿಸಬೇಕು.

ಇದಾದ ಮೇಲೆ ಸೂರ್ಯಾಂತರ್ಗತ ಸವಿತೃನಾಮಕ ಲಕ್ಷ್ಮೀನಾರಾಯಣ ದೇವರಿಗೆ


ಸಪ್ತ ಸಪ್ತಿವಹಪ್ರೀತ ಸಪ್ತಲೋಕಪ್ರದೀಪನ |
ಸಪ್ತಮೀಸಹಿತೋ ದೇವ ಗೃಹಾಣಾರ್ಘಂ ದಿವಾಕರ || ಎಂದು ಅರ್ಘ್ಯವನ್ನು ನೀಡಬೇಕು.

ಇದರ ಜೊತೆಗೆ, ಮಿತ್ರಾಯನಮಃ ಇದಮರ್ಘ್ಯಂ ಎಂದು ಹೇಳಿ, ಇದೇ ರೀತಿ,


ರವಯೇ ನಮಃ |
ಸೂರ್ಯಾಯ ನಮಃ |
ಭಾನವೇ ನಮಃ |
ಖಗಾಯ ನಮಃ |
ಪೂಷ್ಣೇ ನಮಃ |
ಹಿರಣ್ಯಗರ್ಭಾಯ ನಮಃ |
ಮರೀಚಯೇ ನಮಃ |
ಆದಿತ್ಯಾಯ ನಮಃ |
ಸವಿತ್ರೇ ನಮಃ |
ಅರ್ಕಾಯ ನಮಃ |
ಭಾಸ್ಕರಾಯ ನಮಃ


ಇದಮರ್ಘ್ಯಂ | ಎಂದು 12 ಬಾರಿ ಅರ್ಘ್ಯ ನೀಡಬಹುದು.

ನಂತರ ದಿವಾಕರಂ ದೀಪ್ತಸಹಸ್ರರಶ್ಮಿಂ ತೇಜೋಮಯಂ ಜಗತಃ ಕರ್ಮಸಾಕ್ಷಿಮ್ | ಎಂದು ನಮಿಸಿ, ಪೂಜೆಯ ನಂತರ ಆರೋಗ್ಯಾದಿ ಸಕಲ ಭಾಗ್ಯ ನೀಡುವಂತೆ ಕುಟುಂಬ ಸಮೇತ ಪ್ರಾರ್ಥಿಸಬೇಕು. ಕೆಂಪು ಹೂವು, ಕೆಂಪು ಬಣ್ಣದ ಗಂಧವನ್ನು ಸಮರ್ಪಿಸುವುದು ವಿಶೇಷವಾಗಿದೆ

 

                                                                  Ratha - Done from Rangoli

 

 

ಸೂರ್ಯ ದ್ವಾದಶ ನಾಮ ಸ್ತೋತ್ರವನ್ನು ಪಠಿಸಬಹುದು.

 

ಆದಿತ್ಯಃ ಪ್ರಥಮಂ ನಾಮ ದ್ವಿತೀಯಂ ತು ದಿವಾಕರಃ ।
ತೃತೀಯಂ ಭಾಸ್ಕರಃ ಪ್ರೋಕ್ತಂ ಚತುರ್ಥಂ ಚ ಪ್ರಭಾಕರಃ ॥
ಪಂಚಮಂ ಚ ಸಹಸ್ರಾಂಶು ಷಷ್ಠಂ ಚೈವ ತ್ರಿಲೋಚನಃ ।
ಸಪ್ತಮಂ ಹರಿದಶ್ವಂ ಚ ಅಷ್ಟಮಂ ತು ಅಹರ್ಪತಿಃ ॥
ನವಮಂ ದಿನಕರಃ ಪ್ರೋಕ್ತಂ ದಶಮಂ ದ್ವಾದಶಾತ್ಮಕಃ ।
ಏಕಾದಶಂ ತ್ರಿಮೂರ್ತಿಶ್ಚ ದ್ವಾದಶಂ ಸೂರ್ಯ ಏವ ತು ॥



ದ್ವಾದಶಾದಿತ್ಯನಾಮಾನಿ ಪ್ರಾತಃಕಾಲೇ ಪಠೇನ್ನರಃ ।
ದುಃಸ್ವಪ್ನೋ ನಶ್ಯತೇ ತಸ್ಯ ಸರ್ವದುಃಖಂ ಚ ನಶ್ಯತಿ ॥
ದದ್ರುಕುಷ್ಟಹರಂ ಚೈವ ದಾರಿದ್ರ್ಯಂ ಹರತೇ ಧ್ರುವಮ್ ।
ಸರ್ವತೀರ್ಥಕರಂ ಚೈವ ಸರ್ವಕಾಮಫಲಪ್ರದಮ್ ॥
ಯಃ ಪಠೇತ್ ಪ್ರಾತರುತ್ಥಾಯ ಭಕ್ತ್ಯಾ ಸ್ತೋತ್ರಮಿದಂ ನರಃ ।
ಸೌಖ್ಯಮಾಯುಸ್ತಥಾರೋಗ್ಯಂ ಲಭತೇ ಮೋಕ್ಷಮೇವ ಚ ॥



ಸಪ್ತಾಶ್ವ ರಥಮಾರೂಢಂ ಪ್ರಚಂಡಂ ಕಶ್ಯಪಾತ್ಮಜಂ |
ಶ್ವೇತಪದ್ಮಧರಂ ದೇವಂ‌ ತಂ ಸೂರ್ಯಂ ಪ್ರಣಮಾಮ್ಯಹಂ ||



ಶ್ರೀ ಸೂರ್ಯಾಂತರ್ಗತ ಭಾರತಿರಮಣ ಮುಖ್ಯಪ್ರಾಣಾಂತರ್ಗತ ಶ್ರೀ 

ಸೂರ್ಯನಾರಾಯಣ ಸ್ವಾಮಿ ಎಲ್ಲರನ್ನೂ ಸಲಹಿ ಕಾಪಾಡಲಿ.


------------ Hari Om ------------




 


                                                   

Wednesday, February 7, 2024

Rama Darshana

 

Sri Rama Darshana ---- ಶ್ರೀ ರಾಮನ ದರ್ಶನ

 


                                               Lord Sri Rama with Sita Devi


Sri Rama Darshana ---- ಶ್ರೀರಾಮನ ದರ್ಶನ

One Instance Incident :


ಒಮ್ಮೆ ಭಕ್ತನೊಬ್ಬ ಗೋಸ್ವಾಮಿ
ತುಳಸೀದಾಸರನ್ನು ಕೇಳುತ್ತಾನೆ...

"
ನೀವು
ಇಷ್ಟೆಲ್ಲ ರಾಮನಾಮ ಗುಣಗಾನ
ಮಾಡಿದ್ದೀರಲ್ವಾ, ನಿಮಗೆ ಒಮ್ಮೆಯಾದರೂ
ಶ್ರೀರಾಮನ ದರ್ಶನ ಆಗಿದೆಯೇ?"

ಅದಕ್ಕೆ ತುಳಸೀದಾಸರು,
"
ಖಂಡಿತವಾಗಿಯೂ ಆಗಿದೆ!" ಎಂದು
ಹೆಮ್ಮೆಯಿಂದ ಹೇಳುತ್ತಾರೆ.

ಭಕ್ತನು
"
ಹಾಗಿದ್ದರೆ ನನಗೂ ಶ್ರೀರಾಮದರ್ಶನ
ಸಾಧ್ಯವಿದೆಯೇ?" ಎಂದು ಕೇಳುತ್ತಾನೆ.

ತುಳಸೀದಾಸರು "ಯಾಕಿಲ್ಲ? ನಿನಗೂ
ಶ್ರೀರಾಮದರ್ಶನ ಸಾಧ್ಯವಿದೆ! ಅದು ಬಹಳ
ಸುಲಭವಾಗಿಯೂ ಇದೆ. ನೀನು ಈ
ಪ್ರಪಂಚದಲ್ಲಿ ಯಾವುದೇ
ವ್ಯಕ್ತಿಯನ್ನಾದರೂ ನೋಡು, ಅಲ್ಲಿ ನಿನಗೆ
ರಾಮನೇ ಕಾಣುತ್ತಾನೆ!" ಎನ್ನುತ್ತಾರೆ.

ಭಕ್ತನಿಗೆ ಅರ್ಥವಾಗಲಿಲ್ಲ. "ಬಿಡಿಸಿ ಹೇಳಿ
ಸ್ವಾಮೀ" ಎಂದು ವಿನಂತಿಸಿದ.

ತುಳಸೀದಾಸರು ಹೇಳುತ್ತಾರೆ-
"
ನೋಡು, ಇದಕ್ಕೊಂದು ಸುಲಭಸೂತ್ರ
ಇದೆ. ಈ ಪ್ರಪಂಚದಲ್ಲಿ ಯಾರದೇ
ಹೆಸರಿಗಾದರೂ ಸರಿ ಈ ಸೂತ್ರವನ್ನು
ಅಳವಡಿಸಿದರೆ ಕೊನೆಯಲ್ಲಿ ನಿನಗೆ ರಾಮನ
ಹೆಸರೇ ಸಿಗುತ್ತದೆ!"

ಭಕ್ತನಿಗೆ ಮತ್ತಷ್ಟು ಕುತೂಹಲ, ಅಚ್ಚರಿ.
ಯಾವುದು ಆ ಸೂತ್ರ? ಎಂದು ಕೇಳಿದ.

ಆಗ ತುಳಸೀದಾಸರು ಹೇಳುತ್ತಾರೆ:



ನಾಮ ಚತುರ್ಗುಣ ಪಂಚತತ್ತ್ವ ಮಿಲನ
ತಾಸಾಂ ದ್ವಿಗುಣ ಪ್ರಮಾಣ
ತುಲಸೀ ಅಷ್ಟಸೌಭಾಗ್ಯೇ ಅಂತ ಮೇ
ಶೇಷ ರಾಮ ಹೀ ರಾಮ ||

ಇದರ ಪ್ರಕಾರ, ಯಾರದೇ ಹೆಸರಾದರೂ ಸರಿ,
ಅದರಲ್ಲಿರುವ ಅಕ್ಷರಗಳನ್ನು ಎಣಿಸು. ಅದನ್ನು
ನಾಲ್ಕರಿಂದ ಗುಣಿಸು (ಚತುರ್ಗುಣ). ಅದಕ್ಕೆ
ಐದನ್ನು ಕೂಡಿಸು (ಪಂಚತತ್ತ್ವ ಮಿಲನ). ಆಗ
ಬಂದ ಸಂಖ್ಯೆಯನ್ನು ದುಪ್ಪಟ್ಟು ಮಾಡು
(
ದ್ವಿಗುಣ ಪ್ರಮಾಣ). ಬಂದ ಉತ್ತರವನ್ನು
ಎಂಟರಿಂದ ಭಾಗಿಸು (ಅಷ್ಟಸೌಭಾಗ್ಯ).
ಭಾಗಲಬ್ಧ ಎಷ್ಟೇ ಇರಲಿ, ಶೇಷ
ಉಳಿಯುವುದು ಎರಡೇ. ಆ ಎರಡು
ಅಕ್ಷರಗಳೇ "ರಾಮ"!

ಭಕ್ತನಿಗೆ ಆಶ್ಚರ್ಯವೋ ಆಶ್ಚರ್ಯ. ಮೊದಲು
ತನ್ನ ಹೆಸರು "ನಿರಂಜನ" ಎಂದು ನಾಲ್ಕು
ಅಕ್ಷರಗಳು ಇದ್ದದ್ದಕ್ಕೆ ಸೂತ್ರವನ್ನು
ಅನ್ವಯಿಸಿದ. 4X4=16; 16+5=21;
21X2=42; 42/8=
ಭಾಗಲಬ್ಧ 5. ಶೇಷ 2.

ತನ್ನ ಹೆಂಡತಿಯ ಹೆಸರು "ನಿರ್ಮಲಾ" ಎಂದು
ಇದ್ದದ್ದಕ್ಕೆ ಸೂತ್ರ ಅನ್ವಯಿಸಿದ. 3X4=12;
12+5=17; 17X2=34; 34/8 =
ಭಾಗಲಬ್ಧ 4. ಶೇಷ 2.

ತನ್ನ ಮಗಳ ಹೆಸರು "ನಿಧಿ" ಎಂದು ಇದ್ದದ್ದಕ್ಕೆ
ಸೂತ್ರ ಅನ್ವಯಿಸಿದ. 2X4=8; 8+5=13;
13X2=26; 26/8 =
ಭಾಗಲಬ್ಧ 3. ಶೇಷ
2.

ತನ್ನ ಪಕ್ಕದಮನೆಯವನ ಹೆಸರು "ನಿಖಿಲಾನಂದ"
ಎಂದು ಇದ್ದದ್ದಕ್ಕೆ ಸೂತ್ರ ಅನ್ವಯಿಸಿದ.
5X4=20; 20+5=25; 25X2=50; 50/8
=
ಭಾಗಲಬ್ಧ 6. ಶೇಷ 2.

ಹೌದಲ್ವಾ! ಹೆಸರು ಯಾವುದೇ ಇದ್ದರೂ,
ಎಷ್ಟು ಅಕ್ಷರಗಳೇ ಇದ್ದರೂ
ಕೊನೆಯಲ್ಲುಳಿಯುವುದು ಎರಡಕ್ಷರ
"
ರಾಮ" ಮಾತ್ರ! ಭಕ್ತನಿಗೆ ಬಹಳ
ಖುಷಿಯಾಯ್ತು.

ತುಳಸೀದಾಸರ
ಕಾಲಿಗೆರಗಿದ. ಇವತ್ತು ನನಗೆ
ಶ್ರೀರಾಮದರ್ಶನ ಮಾಡಿಸಿದಿರಿ. ಇನ್ನು
ಯಾವಾಗಲೂ ನಾನು ರಾಮನನ್ನೇ
ಕಾಣುತ್ತಿರುತ್ತೇನೆ ಎಂದು ಅಲ್ಲಿಂದ
ಹೊರಟುಹೋದ.

ಅಷ್ಟಾಗಿ, ತುಳಸೀದಾಸರು ಹೇಳಿದ
ಸೂತ್ರದಲ್ಲಿನ ಸಂಖ್ಯೆಗಳ ಮತ್ತು
ಗಣಿತಕ್ರಿಯೆಗಳ ಮಹತ್ವ ಏನು ಗೊತ್ತೇ?

ಚತುರ್ಗುಣ = ಧರ್ಮ, ಅರ್ಥ, ಕಾಮ, ಮೋಕ್ಷ
ಎಂಬ ನಾಲ್ಕು ಪುರುಷಾರ್ಥ.

ಪಂಚತತ್ತ್ವ = ಭೂಮಿ, ನೀರು, ಅಗ್ನಿ,
ವಾಯು, ಆಕಾಶ ಎಂಬ ಪಂಚಮಹಾಭೂತ.

ದ್ವಿಗುಣ = ಮಾಯೆ ಮತ್ತು ಬ್ರಹ್ಮ.

ಅಷ್ಟಸೌಭಾಗ್ಯ = ಅನ್ನ, ಅರ್ಥ, ಪ್ರಭುತ್ವ,
ಯೌವನ, ವೈಭವ, ಗೃಹ, ವಸ್ತ್ರ, ಆಭರಣ ಎಂಬ
ಎಂಟು ಸೌಭಾಗ್ಯಗಳು.

ಇವೆಲ್ಲದರೊಟ್ಟಿಗೆ ನಾವು ಜೀವನಜಂಜಾಟ
ನಡೆಸಿ, ಗುಣಿಸಿ, ಕೂಡಿಸಿ, ಭಾಗಿಸಿ, ಭೋಗಿಸಿ
ಕೊನೆಗೂ ಉಳಿಯುವ ಶೇಷ "ರಾಮ"
ಮಾತ್ರ!


ಜೈ ಶ್ರೀರಾಮ್ ---------- "ಭಗವತ್ ಗೀತೆ ನುಡಿ "



ಹುಟ್ಟಿದಾಗ ನೀ ಅಳುತ್ತಿದ್ದೆ,
ಮಡಿದಾಗ ನಿನ್ನವರು ಅಳುತ್ತಿದ್ದರು.

ಹುಟ್ಟಿದಾಗ ನಿನಗೆ ವಸ್ತ್ರ ತೊಡಿಸುವರು,
ಮಡಿದಾಗ ನಿನ್ನ ವಸ್ತ್ರವ ಬಿಚ್ಚುವರು.

ಹುಟ್ಟಿದಾಗ ಹುಡುಕುವರು ನಿನಗೆ
ನೂರೆಂಟು ನಾಮ,
ಮಡಿದಮೇಲೆ ಶವ ಎಂದೇ
ನಿನ್ನ ನಾಮ.

ನೀನೇನನ್ನೂ ಗಳಿಸದೇ ಬಂದೆ,
ಮಡಿದಾಗ
ನೀನು ಗಳಸಿದ್ದನ್ನು ಕಳದುಕೊಂಡೆ.



ಓ ಮಾನವಾ..


ಮಡಿದಾಗ ಮಣ್ಣಲ್ಲಿ ಮರಳಾಗಿ
ಹೊಗುವ ನೀನು
ನಿನ್ನದು ಎನ್ನಲು ನಿನಗೇನಿದೆ,

ನಿನಗೆ ಜನ್ಮ ಕೊಟ್ಟವರು ಮತ್ತೊಬ್ಬರು,

ನಿನಗೆ ಹೆಸರು ಕೊಟ್ಟದ್ದು ಮತ್ತೊಬ್ಬರು,

ನಿನಗೆ ಜ್ಙಾನ ಹೇಳಿ ಕೊಟ್ಟದ್ದು ಮತ್ತೊಬ್ಬರು,

ಕಡೆಗೆ ನಿನ್ನ ಅಂತ್ಯ ಸಂಸ್ಕಾರ
ನಿರ್ವಹಿಸುವುದು ಕೂಡಾ ಮತ್ತೊಬ್ಬರೇ.

ನಾನು ಎಂದು ಅಹಂಕರಿಸಲು
ನಾನು ಯಾರು ?
ಏನಿದೇ ನನ್ನಲ್ಲಿ ?

ಚಿಂತಿಸುವವನಿಗೆ ದೃಷ್ಟಾಂತವಿದೆ.


------------ Hari Om -------------

Saturday, February 3, 2024

RAMA -- Its Meaning

 

RAMA -- Its Meaning

 

                        
 

"राम" Rama ---- Meaning


The word "राम" has two expressed meanings: to be pleasant and to stop, like a weary traveler finding solace upon seeing a serene place.

In all the words formed to denote pleasant rest, "राम" is inherent, such as आराम (relaxation), विराम (pause), विश्राम (rest), अभिराम (charming), उपराम (calm), and ग्राम (village). Whatever compels one to rest in joy is "राम."

 

In the ups and downs of life, the restless mind in search of a consistently joyful destination finds its goal in "राम." The Indian mind is accustomed to making "राम" a witness in every situation.



In sorrow, "हे राम" (Oh, Ram).


In pain, "
अरे राम" (Oh, Ram)..


In shame, "
हाय राम" (Alas, Ram).


In adversity, "
अरे राम राम" (Oh, Ram Ram).


In greetings, "
राम राम" (Ram Ram).


In oaths, "
राम दुहाई" (Oath in the name of Ram).


In ignorance, "
राम जाने" (Only Ram knows).


In uncertainty, "
राम भरोसे" (In the trust of Ram).


For infallibility, "
रामबाण" (The infallible Ram).


For death, "
रामनाम सत्य" (The name of Ram is truth).


For good governance, "
रामराज्य" (The kingdom of Ram).



Expressions at every step stand as a testament to the presence of "राम." "राम" is so simple that it stands everywhere. Every Indian considers their right to be associated with him. 

For those without support, there is "राम" - "निर्बल के बल राम" (Strength for the weak). The attraction of the "रामकथा" (story of Ram) has never been lost. "राम" is eternal; what is good within us is "राम."

That which remains after everything is plundered is indeed "राम." Amidst profound despair, what rises is also "राम."



---------- Jai Shri Ram --------- ------------
Hari Om -------------




Wednesday, January 24, 2024

GURU Pushya Yoga

 

Guru Pushya Yoga


ಗುರು ಪುಷ್ಯ ಯೋಗ: ಈ ದಿನ ಯಾವೆಲ್ಲ ಕೆಲಸ ಕಾರ್ಯಗಳಿಗೆ ಶುಭದಿನ ಗೊತ್ತಾ ? Guru Pushya Yoga –  Thursday ---- 25th January 2024.

 

ಭಾರತೀಯ ಜ್ಯೋತಿಷ್ಯದ ಪ್ರಕಾರ ಕೆಲವು ತಿಥಿ, ನಕ್ಷತ್ರ ಹಾಗೂ ದಿನಗಳ ಸಂಯೋಜನೆಯನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಈ ಶುಭ ದಿನದಂದು ಕೆಲವು ಕಾರ್ಯಗಳನ್ನು ಕೈಗೊಂಡರೆ ಅಥವಾ ಹೊಸದನ್ನು ಪ್ರಾರಂಭಿಸಿದರೆ ಶುಭವೆಂದು ಹೇಳಲಾಗುತ್ತದೆ.


ಈ ಶುಭ ಸಮಯ ಅಥವಾ ಶುಭ ಮುಹೂರ್ತವು ಅನುಕೂಲಕರ ಫಲಿತಾಂಶಗಳನ್ನು ನೀಡುತ್ತವೆ. ಅಂತಹ ಶುಭ ದಿನದಲ್ಲಿ ಗುರು ಪುಷ್ಯ ಯೋಗವೂ ಒಂದು. ಪುಷ್ಯಾ ನಕ್ಷತ್ರವು ಗುರುವಾರದಂದು ಬಂದರೆ ಅದನ್ನು ಗುರು ಪುಷ್ಯ ಯೋಗವೆಂದು ಕರೆಯಲಾಗುತ್ತದೆ. ಈ ಯೋಗದ ಮಹತ್ವ ಹಾಗೂ ಈ ತಿಂಗಳಲ್ಲಿ ಗುರು ಪುಷ್ಯ ಯೋಗ ಯಾವಾಗ ಬರಲಿದೆ ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿ ಈ ಲೇಖನದಲ್ಲಿದೆ.


ಗುರು ಪುಷ್ಯ ಯೋಗ ಎಂದರೆ ?

ಯಾವಾಗ ಪುಷ್ಯಾ ನಕ್ಷತ್ರವು ಗುರುವಾರದ ದಿನ ಬೀಳುತ್ತದೆಯೋ ಆ ಶುಭ ಯೋಗವನ್ನು ಗುರು ಪುಷ್ಯ ಯೋಗವೆಂದು ಕರೆಯುತ್ತಾರೆ. ಈ ಯೋಗವನ್ನು ಗುರು ಪುಷ್ಯ ಅಮೃತ ಯೋಗವೆಂದೂ ಕರೆಯುತ್ತಾರೆ. ಗುರುಗ್ರಹವು ಜ್ಞಾನದ ಸಂಕೇತವಾಗಿದೆ. ಇದಲ್ಲದೇ ಗುರುವನ್ನು ಅತ್ಯಂತ ಶುಭಗ್ರಹವೆಂದು ಕರೆಯುತ್ತಾರೆ. ಇದಲ್ಲದೇ ಪುಷ್ಯಾ ನಕ್ಷತ್ರವನ್ನೂ ಮೃದು ಹಾಗೂ ಶುಭವೆಂದು ಪರಿಗಣಿಸಲಾಗಿದೆ.


ಇದನ್ನು ಮಹಾನಕ್ಷತ್ರವೆಂದೂ ಕರೆಯುತ್ತಾರೆ. ಈ ಗುರು ಗ್ರಹ ಹಾಗೂ ಪುಷ್ಯಾ ನಕ್ಷತ್ರ ಸೇರಿದಾಗ ಉತ್ತಮ ಅವಧಿ ಪ್ರಾರಂಭಗೊಳ್ಳುತ್ತದೆ. ಈ ಅವಧಿಯಲ್ಲಿ ಕೈಗೊಂಡ ಯಾವುದೇ ಚಟುವಟಿಕೆಯು ಶುಭವಾಗಿ ಪರಿಣಮಿಸುತ್ತದೆ. ಇದೇ ಪುಷ್ಯಾ ನಕ್ಷತ್ರವು ಭಾನುವಾರ ಬಂದರೆ ಅದನ್ನು ರವಿಪುಷ್ಯ ಯೋಗವೆಂದು ಕರೆಯುತ್ತಾರೆ. ಈ ತಿಂಗಳ ಜನವರಿ 25 ರಂದು ಗುರುವಾರ ಶುಭಯೋಗವಾದ ಗುರು ಪುಷ್ಯ ಯೋಗ ಉಂಟಾಗಲಿದೆ.

ದೀರ್ಘಾವಧಿಯ ಫಲ ನೀಡುವ ಈ ಯೋಗ

ಯಾವುದೇ ಶುಭ ಕಾರ್ಯವನ್ನು ಈ ದಿನ ಪ್ರಾರಂಭಿಸಬಹುದು. ಆದರೆ ಈ ಶುಭ ಯೋಗದಲ್ಲಿ ಮದುವೆಯ ಆಚರಣೆಗಳನ್ನು ಮಾಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಈ ಯೋಗವು ಮದುವೆಯ ವಿಚಾರದಲ್ಲಿ ಶಾಪಗ್ರಸ್ತ ಯೋಗವಾಗಿದೆ. ವಿಶೇಷ ಲಾಭವನ್ನು ಪಡೆಯಲು ಮಾಡುವಂತಹ ಹವನಗಳಿಗೆ ಈ ದಿನ ಅತ್ಯಂತ ಶುಭ ಹಾಗೂ ಫಲದಾಯಕ.


ಗುರು ಪುಷ್ಯ ಯೋಗದಂದು ಗುರು ಮಂತ್ರವನ್ನು ಪಠಿಸಬಹುದು. ವ್ಯವಹಾರಕ್ಕೆ ಸಂಬಂಧಪಟ್ಟ ಮಾತುಕತೆಗೂ ಇದು ಶುಭದಿನ. ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳುವಂತೆ ಶನಿ ಮತ್ತು ಗುರು ಇಬ್ಬರೂ ಈ ಯೋಗದ ಮೇಲೆ ಶುಭ ಪರಿಣಾಮವನ್ನು ಬೀರುತ್ತಾರೆ. ಆದ್ದರಿಂದ ದೀರ್ಘಕಾಲದವರೆಗೆ ಪ್ರಯೋಜನ ಪಡೆಯುವಂತಹ ಕೆಲಸಗಳನ್ನು ಈ ಯೋಗದಲ್ಲಿ ಪ್ರಾರಂಭಿಸಬೇಕು.

ಯಾವ ಕಾರ್ಯಗಳನ್ನು ಮಾಡಬಹುದು ಗೊತ್ತಾ ?

ಗುರುಪುಷ್ಯಯೋಗವು ಈ ಕೆಳಗೆ ಹೇಳಿರುವಂತಹ ಕಾರ್ಯಗಳ ಆರಂಭಕ್ಕೆ ಅತ್ಯಂತ ಶುಭದಿನವಾಗಿದೆ.

ಹೊಸ ಕಟ್ಟಡ ನಿರ್ಮಾಣಕ್ಕೆ ಶಿಲಾಕಲ್ಲು ಹಾಕಲು
ಮಂತ್ರ-ತಂತ್ರವನ್ನು ಕಲಿಯಲು ಹಾಗೂ ತಂದೆ, ಅಜ್ಜ, ಗುರುವು ಕಲಿತ ಜ್ಞಾನವನ್ನು ಸಂಪಾದಿಸಲು.
ಹೊಸ ಅಂಗಡಿ-ಕಚೇರಿಯ ಉದ್ಘಾಟನೆಗೆ
ಚಿನ್ನ ಮತ್ತು ಆಭರಣಗಳ ಖರೀದಿಗೆ ಶುಭ ದಿನ
ಹೊಸ ಮನೆ ಖರೀದಿಗೆ ಅಥವಾ ಹೊಸ ಮನೆ ಸ್ಥಳಾಂತರಕ್ಕೆ ಶುಭದಿನ
ದೊಡ್ಡ ವ್ಯವಹಾರಗಳನ್ನು ಆರಂಭಿಸಲೂ ಗುರು ಪುಷ್ಯ ಯೋಗವು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ.


ಗುರು ಪುಷ್ಯ ಯೋಗದಲ್ಲಿ ಮದುವೆಯು ಅಶುಭ


ಪೌರಾಣಿಕ ಕಥೆಯ ಪ್ರಕಾರ ಬ್ರಹ್ಮನು ತನ್ನ ಪುತ್ರಿಯಾದ ಸರಸ್ವತಿಯ ಮದುವೆ ಮಾಡಲು ನಿರ್ಧರಿಸುತ್ತಾನೆ. ಮದುವೆ ದಿನ ಬ್ರಹ್ಮನು ತನ್ನ ಮಗಳ ಅಪ್ರತಿಮ ಸೌಂದರ್ಯವನ್ನು ನೋಡಿ, ಆಕರ್ಷಿತನಾಗುತ್ತಾನೆ. ಮನಸ್ಸು ಗೊಂದಲಕ್ಕೊಳಗಾಗುತ್ತದೆ. ತಾನೇ ತನ್ನ ಸ್ವಂತ ಪುತ್ರಿಯನ್ನು ಮದುವೆಯಾಗಲು ನಿರ್ಧರಿಸುತ್ತಾನೆ. ಆದರೆ ಬ್ರಹ್ಮನ ಈ ಮೋಹವು ಭಂಗವಾಗುತ್ತದೆ.

 

ಇದರಿಂದ ಕೋಪಿಷ್ಠನಾದ ಬ್ರಹ್ಮನು ಪುಷ್ಯಾ ನಕ್ಷತ್ರವನ್ನು ಶಾಪಕ್ಕೀಡು ಮಾಡುತ್ತಾನೆ. ಅದೇನೆಂದರೆ ಯಾರು ಪುಷ್ಯಾ ನಕ್ಷತ್ರದಲ್ಲಿ ಮದುವೆಯಾಗುತ್ತಾರೋ ಅವರ ವೈವಾಹಿಕ ಜೀವನವು ವಿಫಲವಾಗಲಿ ಎಂದು ಈ ನಕ್ಷತ್ರಪುಂಜವನ್ನು ಶಪಿಸಿದನು. ಅಂದಿನಿಂದ ಪುಷ್ಯಾ ನಕ್ಷತ್ರದಲ್ಲಿ ವಿವಾಹ ವಿಧಿಗಳನ್ನು ನೆರವೇರಿಸಲಾಗುವುದಿಲ್ಲ.



ಹೊಸ ಯೋಜನೆಗಳಿಗೆ ಸಕಾಲ ಈ ತಿಂಗಳಲ್ಲಿ ಗುರು ಮತ್ತು ಶನಿಯ ವಕ್ರ ಚಲನೆಯು ಸ್ವಲ್ಪ ಸಮಾಧಾನಕರವಾಗಿರುತ್ತದೆ. ಅನೇಕ ಸ್ಥಗಿತಗೊಂಡಿರುವ ಯೋಜನೆ ಗಳು ಮತ್ತು ಕಾರ್ಯಗಳು ಆರಂಭಗೊಳ್ಳುವುದು.


ವೈದ್ಯಕೀಯ ಕ್ಷೇತ್ರದಲ್ಲೂ ಉತ್ತಮ ಫಲಿತಾಂಶಗಳು ಸಿಗುವುದು. ಜನರು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಲು ಉತ್ಸಾಹದಿಂದ ಕೆಲಸ ಮಾಡುತ್ತಾರೆ. ಇದರ ಪ್ರತಿಫಲವು ಮುಂದಿನ ದಿನಗಳನ್ನು ಉತ್ತಮವಾಗಿರಿಸುವುದು.

 

----------------- Hari Om ----------------

Guru Pushya Amrita Siddi Yoga

 

                                                                        Guru Pushya Yoga

 

 

ಗುರು-ಪುಷ್ಯ ಅಮೃತ ಸಿದ್ಧಿ ಯೋಗ / Guru Pushya Amrita Siddi 

Yoga


‌ ‌ ಇದೇ ಜನವರಿ 25, ಗುರುವಾರ. ಪುಷ್ಯ ನಕ್ಷತ್ರ ಗುರುವಾರದ ದಿನ ಬಂದಿದೆ.


 ‌ ನಕ್ಷತ್ರ ಪ್ರಾರಂಭ ಸಮಯ : ಗುರುವಾರ ಹಗಲು 08:15 ಗಂಟೆಯಿಂದ


ನಕ್ಷತ್ರ ಮುಗಿಯುವ ಸಮಯ : ಶುಕ್ರವಾರ ಹಗಲು 10:27 ಗಂಟೆಯವರೆಗೆ ‌‌ 

 

‌ ‌ 👉 ಈ ದಿನ ಗುರು ದತ್ತಾತ್ರೇಯ, ದಕ್ಷಿಣಾಮೂರ್ತಿ, ಬೃಹಸ್ಪತಿ, ರಾಘವೇಂದ್ರ, ಸಾಯಿಬಾಬಾ ಮಂತ್ರ ಅಥವಾ ಸ್ತೋತ್ರ ಗಳನ್ನು ಜಪ - ಪಾರಾಯಣ ಮಾಡಿ. ಈ ದೇವರ ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆಯಿರಿ. ‌

‌ 👉 ಜಾತಕದಲ್ಲಿ ಗುರು ಪೀಡಿತನಾಗಿದ್ದರೆ ಅಥವಾ ಬಲಹೀನನಾಗಿದ್ದರೆ ಅಥವಾ ಪ್ರಸ್ತುತ ಗುರುಬಲ ಇಲ್ಲದ ರಾಶಿಗಳು (ಮೇಷ, ವೃಷಭ, ಕಟಕ, ಕನ್ಯಾ, ವೃಶ್ಚಿಕ, ಮಕರ, ಕುಂಭ) ಪರಿಹಾರ ಮಾಡಿಕೊಳ್ಳುವುದು ಪರಿಣಾಮಕಾರಿ. ವಿಶೇಷವಾಗಿ ಮೇಷ, ವೃಷಭ, ಕಟಕ ಮತ್ತು ಮಕರ ರಾಶಿ ಸಂಜಾತರು

 

‌ ‌ 👉 ಗುರುವಿನ ಅನುಗ್ರಹ ಹೊಂದಲು ಈ ದಿನ - ಕಡಲೆಬೇಳೆ, ಹಳದಿ ಹೂವುಗಳು, ಹಳದಿ ಹಣ್ಣುಗಳು, ‌ಹಳದಿ ಅಥವಾ ಕೇಸರಿ ವಸ್ತ್ರ, ದೇವತಾ ಮೂರ್ತಿ ಅಥವಾ ಪೋಟೋ, ಧಾರ್ಮಿಕ ಗ್ರಂಥಗಳು, ಹಳದಿ ಸಿಹಿ ತಿನಿಸುಗಳು.... ಇತ್ಯಾದಿ ವಸ್ತುಗಳನ್ನು ದಕ್ಷಿಣೆ ಸಹಿತವಾಗಿ - ಗುರು ಅಥವಾ ಗುರು ಸಮಾನರಾದವರಿಗೆ ದಾನ ಮಾಡಿ. ‌ ‌

👉 ಈ ದಿನ ಗುರು ಸೇವೆ ಮಾಡಿ, ಗುರುಗಳ ಆಶೀರ್ವಾದ ಪಡೆಯಿರಿ.

 

-------------- Hari Om --------------